ಕಾರ್ಯಯೋಜನೆಗಳು

ತುರ್ತಾಗಿ ಕಾರ್ಯರೂಪಕ್ಕೆ ಬರಬೇಕಾದ ಕನ್ನಡ ಮತ್ತು ಗಣಕ ಸಂಬಂಧಿ ಯೋಜನೆಗಳು

ವಿವಿಧ ಕ್ಷೇತ್ರಗಳು :

 ಸಂಶೋಧನೆ ಮತ್ತು ಅಭಿವೃದ್ಧಿ

 ತರಬೇತಿ

 ಶಿಕ್ಷಣ

 ಸಾಹಿತ್ಯ

 ಸಾಂಸ್ಕೃತಿಕ ಕ್ಷೇತ್ರ

 ಜಾಗೃತಿ, ಪ್ರಚಾರ ಇತ್ಯಾದಿ.

ಸಂಶೋಧನೆ ಮತ್ತು ಅಭಿವೃದ್ಧಿ:

1. ಆಸ್ಕಿ ಆಧಾರಿತ `ನುಡಿ' ಲಿಪಿ ತಂತ್ರಾಂಶವನ್ನು ಅಗತ್ಯಗಳಿಗೆ ತಕ್ಕಂತೆ ಬದಲಾವಣೆ,

   ಸುಧಾರಣೆಗಳಿಗೆ ಒಳಪಡಿಸಿ ನಿರ್ದಿಷ್ಟ ಕಾಲಾವಧಿಯಲ್ಲಿ ಬಿಡುಗಡೆ ಮಾಡುವುದು.

2. ಹೆಚ್ಚಿನ ಅಕ್ಷರ ಶೈಲಿಗಳು (ಫಾಂಟ್ಗಳು)ನ್ನು ಸಿದ್ಧಪಡಿಸುವುದು.

3. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ವಿಂಡೋಸ್ಗೆ).

4. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ಲೈನೆಕ್ಸ್ ಗೆ).

5. ಪರಿವರ್ತಕ ತಂತ್ರಾಂಶಗಳು.

   (ಇಸ್ಕಿಯಿಂದ ಯೂನಿಕೋಡ್, ಯೂನಿಕೋಡ್ನಿಂದ ಇಸ್ಕಿ ಹಾಗೂ ಬೇರೆಬೇರೆ ಲಿಪಿ    

    ತಂತ್ರಾಂಶ ಗಳಿಂದ ನುಡಿ ತಂತ್ರಾಂಶಕ್ಕೆ ಮಾಹಿತಿ ಸಂವಹನಕ್ಕಾಗಿ ಸೌಲಭ್ಯಗಳು).

6. `ಓಪನ್ ಆಫೀಸ್'ನ ಕನ್ನಡ ಆವೃತ್ತಿ (ಕನ್ನಡ ಆಫೀಸ್).

7. ಪದಪರೀಕ್ಷೆ, ಹುಡುಕು-ಬದಲಿಸು, ವ್ಯಾಕರಣ ಪರೀಕ್ಷೆ ಇತ್ಯಾದಿ ಸೌಲಭ್ಯಗಳು.

8. ಅಂಗೈ ಗಣಕ, ಮೊಬೈಲ್ ಫೋನ್ ಇತ್ಯಾದಿ ಉಪಕರಣಗಳಲ್ಲಿ ಕನ್ನಡದ ಅಳವಡಿಕೆ.

9. ಕೈಬರಹ ಅಕ್ಷರಜಾಣ*  ಮತ್ತು ಮುದ್ರಿತಪಠ್ಯ ಅಕ್ಷರಜಾಣ.

10. ಧ್ವನಿಸಂಶ್ಲೇಷಣ* ಮತ್ತು ನುಡಿಜಾಣ*.

ತರಬೇತಿ :

1. ಸಾರ್ವಜನಿಕರಿಗೆ ಗಣಕಗಳಲ್ಲಿ ನುಡಿ ತಂತ್ರಾಂಶದ ಬಳಕೆಯ ಮೂಲ ತರಬೇತಿ.

2. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಗಣಕಗಳಲ್ಲಿ ನುಡಿ

   ತಂತ್ರಾಂಶದ ಬಳಕೆಯ ಮೂಲ ತರಬೇತಿ.

3. ಅನ್ವಯ ತಂತ್ರಾಂಶಗಳಲ್ಲಿ ನುಡಿ ತಂತ್ರಾಂಶದ ಬಳಕೆ - ತರಬೇತಿದಾರರಿಗೆ ತರಬೇತಿ .

4. ಕನ್ನಡ ಅನ್ವಯ ತಂತ್ರಾಂಶ*  ಅಭಿವೃದ್ಧಿ ಮಾಡುವವರಿಗೆ ತರಬೇತಿ.

5. ಶಿಕ್ಷಕ ತರಬೇತಿ ಶಿಬಿರ.

ಕನ್ನಡದಲ್ಲಿ ವಿಶ್ವಕೋಶಗಳು (ಬಹುಮಾಧ್ಯಮ ಸಿಡಿಗಳು) :

1. ಕನ್ನಡ ವಿಶ್ವಕೋಶ.

2. ವಿಜ್ಞಾನ ವಿಶ್ವಕೋಶ.

3 ಕಿರಿಯರ ವಿಶ್ವಕೋಶ.

4. ಕಿರಿಯರ ವಿಜ್ಞಾನ ವಿಶ್ವಕೋಶ.

5. `ಕಣಾದ' ವಿಶ್ವಕೋಶ ಇತ್ಯಾದಿ ಇನ್ನೂ ಅನೇಕ ವಿಶ್ವಕೋಶಗಳು.

ಶಿಕ್ಷಣ:

ಕನ್ನಡದಲ್ಲಿ ಗಣಕ ಶಿಕ್ಷಣ / ಗಣಕಗಳಲ್ಲಿ ಕನ್ನಡದ ಬಳಕೆ ಕುರಿತು ಶಿಕ್ಷಣ.

1. ಕನ್ನಡಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮಗಳು ಮತ್ತು ಪಠ್ಯಗಳು

    (ಪ್ರಮಾಣ, ಭಾಷೆ, ತಾಂತ್ರಿಕ ಪದಗಳು ಇತ್ಯಾದಿ):

 ಪ್ರಾಥಮಿಕ ಶಾಲೆಗಳು.

 ಮಾಧ್ಯಮಿಕ ಶಾಲೆಗಳು.

 ಪ್ರೌಢಶಾಲೆಗಳು.

 ಪದವಿಪೂರ್ವ ಶಿಕ್ಷಣ.

 ಪದವಿ ಶಿಕ್ಷಣ.

 ಸ್ನಾತಕೋತ್ತರ ವಿದ್ಯಾಗಳಿಗೆ ಶಿಕ್ಷಣ.

 ವೃತ್ತಿ ಶಿಕ್ಷಣ.

2. ಶಿಕ್ಷಣಕ್ಕಾಗಿ ಬಹುಮಾಧ್ಯಮ ಅಡಕಮುದ್ರಿಕೆಗಳು (ಸಿಡಿ).

 ಕನ್ನಡ ಕಲಿ.

 ಅಕ್ಷರ ಕಲಿ ವ್ಯಾಕರಣ ಕಲಿ, ಗಣಿತ ಕಲಿ ಇತ್ಯಾದಿ.

3. ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ತಾಂತ್ರಿಕ ವಿಜ್ಞಾನ ಮುಂತಾದ

   ವಿಷಯಗಳಿಗೆ ಸಂಬಂಧಿಸಿದ ಮೂಲತತ್ವಗಳನ್ನು ಸರಳವಾಗಿ ತಿಳಿಸುವ ಮಾದರಿ

   ಬಹುಮಾಧ್ಯಮ ಅಡಕ ಮುದ್ರಿಕೆಗಳು (4 ನೇ ತರಗತಿ ವರೆಗಿನ ಮಕ್ಕಳಿಗೆ).

4. ಕನ್ನಡದಲ್ಲಿ ಲೋಗೋ ತಂತ್ರಾಂಶ.

5. ಮಕ್ಕಳಿಗೆ ಬಹುಮಾಧ್ಯಮ ರೂಪದ ಪದ್ಯಗಳು.

6. ಮಕ್ಕಳಿಗೆ ಬಹುಮಾಧ್ಯಮ ರೂಪದ ಕಥೆಗಳು.

ನಿಂಟುಗಳು/ಗ್ರಂಥಸೂಚಿ:

1. ಕನ್ನಡ-ಕನ್ನಡ ನಿಂಟು(ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ) ಅಡಕಮುದ್ರಿಕೆ (ಸಿಡಿ).

2. ಇಂಗ್ಲಿಷ್-ಕನ್ನಡ ನಿಂಟು ಅಡಕ ಮುದ್ರಿಕೆ (ಸಿಡಿ).

   (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನೆ).

3. ಕನ್ನಡ ಗ್ರಂಥಸೂಚಿ ಅಡಕಮುದ್ರಿಕೆ(ಸಿಡಿ)

   (ಮೈಸೂರು ವಿಶ್ವವಿದ್ಯಾನಿಲಯದ ಹಾಗೂ ಇತರ ಸಂಸ್ಥೆಗಳ ಪ್ರಕಟನೆಗಳು)

ಕನ್ನಡ ಸಾಹಿತ್ಯ ಕ್ಷೇತ್ರ- ವಿದ್ಯನ್ಮಾನ ರೂಪ:

- ಕನ್ನಡ ಭಾಷೆಯ ಉಗಮ ಮತ್ತು ವಿಕಾಸ.

- ಕನ್ನಡ ಸಾಹಿತ್ಯ ಚರಿತ್ರೆ..

- ಕನ್ನಡ ಗ್ರಂಥಸೂಚಿ.

- ಪ್ರಮುಖವಾದ ಹಾಗೂ ಅಲಭ್ಯ ಕನ್ನಡ ಕೃತಿಗಳ ಗಣಕೀಕೃತ ರೂಪ.

  ಸಾಹಿತ್ಯ ಪ್ರಕಾರಗಳ ಹಲವಾರು ರೀತಿಯ ಅಧ್ಯಯನ, ಪರಾಮರ್ಶನೆಗಳಿಗೆ ಸೂಕ್ತವಾದ

ವಿವಿಧ ತಂತ್ರಾಂಶಗಳು :

- ಸಾಹಿತ್ಯ ಕೃತಿಗಳ ವರ್ಗೀಕೃತ ದತ್ತ ಸಂಚಯ.

- ಸಾಹಿತಿಗಳನ್ನು ಕುರಿತ ಸಮಗ್ರ ಮಾಹಿತಿ ಸಂಚಯ.

- ಪ್ರಮುಖ ಸಾಹಿತಿಗಳನ್ನು ಕುರಿತ ಬಹುಮಾಧ್ಯಮ ಅಡಕ ಮುದ್ರಿಕೆಗಳು.

- ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕೃತಿಗಳ ಗಣಕೀಕೃತ ರೂಪ.

- ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕ್ಷೇತ್ರದ ಬರಹಗಾರರ ಮಾಹಿತಿ ಸಂಚಯ.

ಇದೇ ರೀತಿ ಕನ್ನಡ ಸಾಂಸ್ಕೃತಿಕ ಕ್ಷೇತ್ರದ ಜಾನಪದ, ಸಂಗೀತ, ನೃತ್ಯ, ಶಿಲ್ಪ ಮುಂತಾದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಮೇಲಿನಂತೆ ವಿಪುಲವಾದ ಮಾಹಿತಿ ಸಂಚಯಗಳು ನಿರ್ಮಾಣವಾಗಬೇಕು.

ಈ ಎಲ್ಲಾ ಕಾರ್ಯಯೋಜನೆಗಳನ್ನು ಜಾರಿಗೊಳಿಸಲು ಕನ್ನಡದಲ್ಲಿ ಆಸಕ್ತಿಯುಳ್ಳ ಅನೇಕ ಗಣಕ ತಜ್ಞರು ಹಾಗೂ ಆಸಕ್ತ ತಂತ್ರಾಂಶ ಅಭಿವೃದ್ಧಿ ಸಂಸ್ಥೆಗಳ ಸಹಕಾರ ಅಗತ್ಯವಾಗಿರುತ್ತದೆ. ಈ ಕಾರ್ಯಗಳನ್ನು ಕನ್ನಡ ಗಣಕ ಪರಿಷತ್ತಿನ ಮುಖ್ಯ ಕಾರ್ಯಾಲಯ ಹಾಗೂ ರಾಜ್ಯಾದ್ಯಂತ ಇರುವ ಹಲವು ಶಾಖೆಗಳ ಆಶ್ರಯ ಮತ್ತು ಮಾರ್ಗದರ್ಶನದಲ್ಲಿ ಕೈಗೊಳ್ಳಬಹುದಾಗಿದೆ. ಈಗಾಗಲೇ ಇಂತಹ ಹಲವು ಕಾರ್ಯಕ್ರಮಗಳಲ್ಲಿ ಯಶಸ್ಸನ್ನು ಸಾಧಿಸಲಾಗಿದೆ. ಕನ್ನಡಿಗರ ಅಭಿಮಾನ, ಆಸಕ್ತಿ ಮತ್ತು ಉದಾರತೆಗಳಿಂದ ಇವುಗಳಲ್ಲಿ ಯಶಸ್ಸನ್ನು ಸಾಧಿಸಬಹುದೆಂದು

 

 

ಪದ ವಿವರಣೆ

ಕೈಬರಹ ಅಕ್ಷರಜಾಣ

Character Recognition

 

ಧ್ವನಿಸಂಶ್ಲೇಷಣ

Speech Synthesis

 

ಅನ್ವಯ ತಂತ್ರಾಂಶ

Application software