ತಂತ್ರಾಂಶಗಳು

ತಂತ್ರಾಂಶದ ನಾಲ್ಕನೆಯ ಆವೃತ್ತಿಯ ಬಿಡುಗಡೆ ಸಮಾರಂಭವನ್ನು ದಿನಾಂಕ 12.12.2003 ನೇ ಶುಕ್ರವಾರ ವಿಧಾನ ಸೌಧದಲ್ಲಿ ಏರ್ಪಡಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಡಿ.ಬಿ. ಇನಾಂದಾರ್ ಅವರು ನುಡಿ ತಂತ್ರಾಂಶದ 4ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಇದಿನಬ್ಬ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾಗಣೇಶ್, ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಶ್ರೀ ಜಾವೇದ್ ಅಖ್ತರ್ ಮುಂತಾದ ಅನೇಕ ಹಿರಿಯ ಸರ್ಕಾರಿ ಅಧಿಕಾರಿಗಳು ಈ ಸಮಾರಂಭದಲ್ಲಿ ಹಾಜರಿದ್ದರು.


ಸೂಚನೆ:

1. `ನುಡಿ', ಸರಳನುಡಿ, ಎಸ್ ಡಿ ಕೆ (ತಂತ್ರಾಂಶ ಅಭಿವೃದ್ಧಿ ಸಲಕರಣೆ), ಅಕ್ಷರಶೈಲಿಗಳನ್ನು ಡೌನ್ಲೋಡ್ ಮಾಡುವ ಸಮಯದಲ್ಲಿ ಬಿಲ್ಡ್ ಸಂಖ್ಯೆ ಹಾಗೂ ಬಿಲ್ಡ್ ದಿನಾಂಕವನ್ನು ನಿಮ್ಮ ಬಳಿ ಈಗಾಗಲೇ ಇರುವ `ನುಡಿ' ಯ ಬಿಲ್ಡ್ ಸಂಖ್ಯೆ ಹಾಗೂ ದಿನಾಂಕದೊಡನೆ ಹೋಲಿಸಿರಿ. ಬಿಲ್ಡ್ ಸಂಖ್ಯೆ ಹಾಗೂ ಬಿಲ್ಡ್ ದಿನಾಂಕವು ಖಜಚಿಜಟಜ.ಣಥಣ ಅಥವಾ `ನುಡಿಯ ಬಗ್ಗೆ' ಅಂಕಣದಲ್ಲಿ ಕಾಣಿಸುತ್ತದೆ.

2. ಎಲ್ಲಾ ತಂತ್ರಾಂಶಗಳ ಕಡತಗಳು ಜಿಪ್ ರೂಪದಲ್ಲಿವೆ.

1. ನುಡಿ ಕನ್ನಡ ಲಿಪಿ ತಂತ್ರಾಂಶ 5.0 :

ಇದರಲ್ಲಿ ಯೂನಿಕೋಡ್ ಮತ್ತು ಯುಟಿಎಫ್-8 ಶಿಷ್ಟತೆಗಳನ್ನು ಅಳವಡಿಸಲಾಗಿದೆ; ಹೊಸ ಅಕ್ಷರ ಶೈಲಿಗಳು ಲಭ್ಯವಿವೆ;ಎಂಎಸ್ವರ್ಡ್ನಲ್ಲಿ ಪದಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಮುಂತಾದ ಸೌಲಭ್ಯವನ್ನು ನೀಡಲಾಗಿದೆ.

ನುಡಿ 5.0 - ನಲ್ಲಿ ಹೊಸತೇನು ?

1. ನುಡಿ 19 ರಿಂದ ನುಡಿ 28 ರವರೆಗೆ ಹಾಗೂ ನುಡಿ ಕೆವಿಕೆ, ನುಡಿ ವೆಬ್01ಕೆ ಮುಂತಾದ ಹನ್ನೆರಡು ಹೊಸ ಅಕ್ಷರಶೈಲಿಗಳನ್ನು ನೀಡಲಾಗಿದೆ. ಮತ್ತು ಹತ್ತು ಯೂನಿಕೋಡ್ ಶಿಷ್ಟತೆಯ ಅಕ್ಷರಶೈಲಿಗಳು ದೊರಕುತ್ತವೆ.

2. ಕೋರಲ್ ಡ್ರಾ ನಲ್ಲಿ ಸುಗಮವಾಗಿ ಬಳಸಲು ಅನುಕೂಲ ಒದಗಿಸಲಾಗಿದೆ.

3. ಸ್ವರಚಿಹ್ನೆಗಳೊಂದಿಗೆ ಸಂಗೀತದ ಸಾಹಿತ್ಯ, ವೇದ ಮಂತ್ರಗಳು ಮುಂತಾದುವನ್ನು ಬೆರಳಚ್ಚಿಸಲು ನುಡಿ ವೇದಿಕ್ ಅಕ್ಷರಶೈಲಿಗಳನ್ನು ನೀಡಲಾಗಿದೆ.

4. ಅಕಾರಾದಿ ವಿಂಗಡಣೆ ಸೌಲಭ್ಯಗಳಲಿದ್ದ ನ್ಯೂನತೆಗಳನ್ನು ನಿವಾರಿಸಲಾಗಿದೆ.

5. ಪದಪರೀಕ್ಷಕ ಹೆಚ್ಚು ವ್ಯಾಪಕವಾಗಿದೆ 1,50,000 ಪದಗಳಿಂದ ಕೂಡಿದೆ.

6. ನುಡಿಯಲ್ಲಿ ಈ ಹಿಂದೆ ಇದ್ದ ಎಲ್ಲ ಸೌಲಭ್ಯಗಳೂ ಇಲ್ಲಿಯೂ ದೊರಕುತ್ತವೆ.

7. ಈಗ ನೇರವಾಗಿ ನುಡಿ ಅಕ್ಷರ ಶೈಲಿಗಳಲ್ಲಿ ಅಂಚೆ ಪೆಟ್ಟಿಗೆಯಲ್ಲಿ ಬರೆಯಬಹುದು, ಬ್ಲಾಗುಗಳನ್ನು ರಚಿಸಬಹುದು.

8 ಹಿಂದಿನ ನುಡಿ ಅಕ್ಷರಶೈಲಿಗಳಲ್ಲಿದ್ದ ಮಾಹಿತಿಯನ್ನು ಯೂನಿಕೋಡ್ ಅಕ್ಷರಶೈಲಿಗೆ ಪರಿವರ್ತಿಸಿಕೊಳ್ಳಬಹುದು.

9. ಯೂನಿಕೋಡ್ ಅಕ್ಷರಶೈಲಿಗಳಲ್ಲಿರುವ ಮಾಹಿತಿಯನ್ನು ಹಿಂದಿನ ನುಡಿ ಅಕ್ಷರಶೈಲಿಗಳಿಗೆ ಪರಿವರ್ತಿಸಿಕೊಳ್ಳಬಹುದು.


2. ಸರಳನುಡಿ 4.0 :

ಸುಲಭವಾಗಿ ಡೌನ್ಲೋಡ್ ಮಾಡಲು ಅನುಕೂಲವಾಗುವಂತೆ ನುಡಿಯ ಸಂಕ್ಷಿಪ್ತ ಆವೃತ್ತಿಯಾದ ಸರಳನುಡಿ 4.0 ಲಿಪಿ ತಂತ್ರಾಂಶವನ್ನು ನೀಡಲಾಗಿದೆ. ಇದು ಸುಮಾರು 300 ಕೆ.ಬಿ. ಪ್ರಮಾಣ ಉಳ್ಳದ್ದಾಗಿದೆ.


3. ನುಡಿ ಎಸ್ಡಿಕೆ (ತಂತ್ರಾಂಶ ಅಭಿವೃದ್ಧಿ ಸಲಕರಣೆಗಳು) :

ಇದರಲ್ಲಿ ಕನ್ನಡದ ದತ್ತಾಂಶಗಳ ಅಕಾರಾದಿ ವಿಂಗಡಣೆ, ಹುಡುಕು ಮುಂತಾದ ಭಾಷಾ ಸಂಸ್ಕರಣೆಗಳಿಗೆ ಅಗತ್ಯವಾದ ತಂತ್ರಾಂಶ ಸಲಕರಣೆಗಳನ್ನು* ನೀಡಲಾಗಿದೆ. ಇವುಗಳನ್ನು ಬಳಸಿ ಕೊಂಡು ದತ್ತಸಂಸ್ಕರಣೆ, ಅಂತರಜಾಲ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಆನ್ವಯಿಕ ತಂತ್ರಾಂಶ ಗಳನ್ನು ಅಭಿವೃದ್ಧಿಪಡಿಸಬಹುದು.


4. ಅಕ್ಷರ ಶೈಲಿಗಳು :

`ನುಡಿ' ತಂತ್ರಾಂಶದೊಡನೆ ಬಳಸಲು ಸಿದ್ಧಪಡಿಸಿರುವ ಎಲ್ಲಾ ಅಕ್ಷರಶೈಲಿಗಳನ್ನು ಈ ಕಡತದಲ್ಲಿ ನೀಡಲಾ ಗಿದೆ. ಇವುಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಗಣಕದ ಫಾಂಟ್ಸ್ ಕಡತದಲ್ಲಿ ಅನುಸ್ಫಾಪಿಸಿ ಕೊಳ್ಳಬಹುದು.

ನುಡಿ ಉಚಿತ ತಂತ್ರಾಂಶಗಳು
ನುಡಿ 6.0
ಗಾತ್ರ 4.8 ಎಂ.ಬಿ
ನುಡಿ 5.0
ಗಾತ್ರ 13.5 ಎಂ.ಬಿ
ನುಡಿ ಅಕ್ಷರ ಶೈಲಿ(Fonts)
ಗಾತ್ರ 5.1 ಎಂ.ಬಿ

ನುಡಿ ತಂತ್ರಾಂಶವನ್ನು ಬಳಸಿ ಮಾಡಿದ ಇತರೆ ಉಚಿತ ತಂತ್ರಾಂಶಗಳು
ಅಕ್ಷರಕಲಿ
ಗಾತ್ರ 3.65 ಎಂ.ಬಿ
ಅಂಕಿ ವಿನೋದ
ಗಾತ್ರ 1.4 ಎಂ.ಬಿ
ವಿಳಾಸಸೂಚಿ
ಗಾತ್ರ 8.89 ಎಂ.ಬಿ
ದಿನಸೂಚಿ
ಗಾತ್ರ 1.95 ಎಂ.ಬಿ
ಕಾರ್ಯಸೂಚಿ
ಗಾತ್ರ 3.94 ಎಂ.ಬಿ
ಕೀಲಿಮಣೆ ಬೋಧಕ
ಗಾತ್ರ 901 ಕೆ.ಬಿ
ಕೀಲಿಮಣೆ ಬೋಧಕ 2
ಗಾತ್ರ 545 ಕೆ.ಬಿ
ಪದವಿಹಾರ
ಗಾತ್ರ 3.1 ಎಂ.ಬಿ

ಇತರೆ ಉಪಯುಕ್ತ ಮಾಹಿತಿಗಳು
ಪಂಡಿತ
ಗಾತ್ರ 38 ಕೆ.ಬಿ
ಇತರೆ ಉಚಿತ ತಂತ್ರಾಂಶಗಳು
ಗಾತ್ರ 12 ಕೆ.ಬಿ
ನಿಘಂಟು
ಗಾತ್ರ 55.8 ಕೆ.ಬಿ
ನುಡಿ ಕೀಲಿಮಣೆ ವಿನ್ಯಾಸ - ಚಿತ್ರ
ಗಾತ್ರ 76 ಕೆ.ಬಿ