ಪಂಪನ ಮಹಾಕಾವ್ಯಗಳು

ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಅಭಿವೃದ್ಧಿಪಡಿಸಲಾದ ಅಡಕಮುದ್ರಿಕೆ. ಒಂದು ವಿದ್ಯುನ್ಮಾನ ಪುಸ್ತಕ ಹೇಗಿರಬೇಕು ಅಥವಾ ಹೇಗಿರಬಹುದು ಎಂಬುದಕ್ಕೆ ಉದಾಹರಣೆ. ಪಂಪನ ಎರಡೂ ಕಾವ್ಯಗಳ ಎಲ್ಲ ಪಠ್ಯ, ದೀಪಿಕೆ, ಗದ್ಯಾನುವಾದ ಇಲ್ಲಿ ಶೋಧನಾ ಸೌಲಭ್ಯದೊಂದಿಗೆ ಲಭ್ಯ. ಜೊತೆಗೆ ಯಾವುದೇ ಪದ ಇಡೀ ಕಾವ್ಯದಲ್ಲಿ ಎಲ್ಲೆಲ್ಲಿ ಉಕ್ತವಾಗಿದೆ ಎಂಬುದನ್ನು ಸಹ ಹುಡುಕಿ ತಿಳಿಯಬಹುದು. ಆಯ್ದ ಪದ್ಯಗಳ ವಾಚನ, ಗಮಕ ಹಾಗೂ ಒಂದು ಪದ್ಯದ ಗಾಯನವಿದೆ. ಪಂಪನ ಸ್ಥಳವಾದ ಬನವಾಸಿಯ ಕುರಿತ ವಿಡಿಯೋ ನೋಡಬಹುದು. ಅಡಕಮುದ್ರೆಯಲ್ಲಿರುವ ವಿಷಯಗಳ ಅಕಾರಾದಿ, ಅಧ್ಯಯನ ಹಾಗೂ ಇತರೆ ಭಾರತಗಳೊಂದಿಗಿನ ತೌಲನಿಕ ಅಧ್ಯಯನಕ್ಕೆ ಸಹಕಾರಿ. ಅಕಾರಾದಿ ಹಾಗೂ ಆಶ್ವಾಸಗಳ ಆಧಾರದಲ್ಲಿಯೂ ಪಠ್ಯ ಲಭ್ಯ. ಪಂಪ ಕೃತಿಗಳ ಕುರಿತಾದ ಬಿಬ್ಲೊಗ್ರಫಿ ಒಂದು ಕೊಡುಗೆಯೇ ಸರಿ. ಪಂಪನ ಕುರಿತಾದ ಶಾಸನದ ಚಿತ್ರಗಳು, ಪಠ್ಯ ಇದರ ಶೈಕ್ಷಣಿಕ ಮಹತ್ವವನ್ನು ಹೆಚ್ಚಿಸಿವೆ. ಇದು ವಿದ್ವಾಂಸರಿಂದ ತೊಡಗಿ ಕನ್ನಡಾಸಕ್ತರವರೆಗೂ ಸಂಗ್ರಾಹ್ಯವಾದ ಅಡಕಮುದ್ರಿಕೆ.

ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮಾರಾಜಪೇಟೆ, ಬೆಂಗಳೂರು - 560 018. ಇಲ್ಲಿ ಲಭ್ಯ.

kagapa.in bendrekrishnappa.in