ಶಿಷ್ಟತೆ ಮತ್ತು ಏಕರೂಪತೆ

ಕನ್ನಡ ಗಣಕೀಕರಣ
ಯೂನಿಕೋಡ್ ಮತ್ತು ಕನ್ನಡ ಕನ್ನಡ ಯೂನಿಕೋಡ್ ಪಟ್ಟಿ
ಗಣಕೀಕರಣ ಮತ್ತು ಕನ್ನಡ  
ಕನ್ನಡ ಲಿಪಿ ತಂತ್ರಾಂಶಗಳಿಗೆ ಚೌಕಟ್ಟು: ಏನು? ಏಕೆ?
 

ಕನ್ನಡ ತಂತ್ರಾಂಶಗಳ (ಸಾಪ್ಟವೇರ್) ಅಭಿವೃದ್ಧಿ ಮತ್ತು ಅವುಗಳಲ್ಲಿ ಏಕರೂಪತೆ ತರಲು ಅಗತ್ಯವಾದ ನಿರ್ದಿಷ್ಟ ಅಕ್ಷರಭಾಗಗಳು (ಗ್ಲಿಪ್) ಮತ್ತು ಸಂಕೇತಗಳನ್ನು [ಆಸ್ಕಿ(ಅಮೇರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನಫರ್ಮೇಷನ್ ಅಂಡ್ ಇಂಟರ್ಛೇಂಚ್), ಇಸ್ಕಿ (ಇಂಡಿಯನ್ ಸ್ಕ್ರಿಪ್ಟ್ ಕೋಡ್ ಫಾರ್ ಇನಫರ್ಮೇಷನ್ ಅಂಡ್ ಇಂಟರ್ಛೇಂಚ್) ಇತ್ಯಾದಿ] ನಿಗದಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕನಾ9ಟಕ ಸಕಾ9ರದಿಂದ ರಚಿತವಾದ ಸಮಿತಿಯ ವರದಿ.
 

ಹಿನ್ನೆಲೆ:

ಕಳೆದ ಎರಡು ದಶಕಗಳಲ್ಲಿ, ಗಣಕಗಳಲ್ಲಿ ಕನ್ನಡವನ್ನು ಬಳಸುವ ದಿಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಮೊದಲು "ಡಾಸ್'' ನಂತರ "ವಿಂಡೋಸ್'' ಕಾರ್ಯಾಚರಣ ವ್ಯವಸ್ಥೆಗಳಲ್ಲಿ (ಆಪರೇಟಿಂಗ್ ಸಿಸ್ಟಂಮ್) ಕನ್ನಡ ಲಿಪಿಯನ್ನು ಮೂಡಿಸುವ ಕಾರ್ಯದಲ್ಲಿ ಅನೇಕ ಲಿಪಿ ತಂತ್ರಾಂಶ (ಸ್ಕ್ರಿಪ್ಟ್ ಆರ್ ಫಾಂಟ್ ಸಾಪ್ಟವೇರ್) ತಯಾರಕರು ಯಶಸ್ಸು ಸಾಧಿಸಿದ್ದಾರೆ.
 

ಕನ್ನಡ ಲಿಪಿ ತಂತ್ರಾಂಶಗಳು ಇದುವರೆಗೆ ಮುಖ್ಯವಾಗಿ ಪದ ಸಂಸ್ಕರಣೆಗೆ (ವರ್ಡ್ ಪ್ರೊಸೆಸಿಂಗ್, ಡಿ.ಟಿ.ಪಿ.) ಮಾತ್ರ ಬಳಕೆಯಾಗಿವೆ. ಈಗ ಕರ್ನಾಟಕ ಸರ್ಕಾರವು ತನ್ನ ಎಲ್ಲ ವ್ಯವಹಾರಗಳನ್ನೂ ಗಣಕೀಕರಿಸಿ ವಿದ್ಯುನ್ಮಾನ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಕರ್ನಾಟಕದ ಅಧಿಕೃತ ಆಡಳಿತ ಭಾಷೆಯು ಕನ್ನಡವಾದುದರಿಂದ ಎಲ್ಲ ಗಣಕೀಕೃತ ವ್ಯವಹಾರಗಳು ಕನ್ನಡದಲ್ಲೇ ಇರಬೇಕು. ಇದನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ

ಶ್ರೀ ಎಸ್ ಎಂ ಕೃಷ್ಣ ಅವರು ಮಾರ್ಚ್ 18, 2000 ದಂದು ಪ್ರಕಟಿಸಿದ ಸರಕಾರದ ಮಾಹಿತಿ ತಂತ್ರಜ್ಞಾನ ನೀತಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
 

ತಂತ್ರಾಂಶಗಳಿಗೆ ಶಿಷ್ಟತೆ:

ಈ ಹಿನ್ನೆಲೆಯಲ್ಲಿ ಲಿಪಿ ತಂತ್ರಾಶಗಳಿಗೆ ಅಗತ್ಯವಾದ ಶಿಷ್ಟತೆ, (ಸ್ಟಾಂಡರ್ಡ್), ಏಕರೂಪತೆ (ಯ್ಯನಿಫಾರಮಿಟಿ) ಕುರಿತ ಚಿಂತನೆ ಅತ್ಯಗತ್ಯವಾಗಿದೆ. ಇದನ್ನು ಕರ್ನಾಟಕ ಸರ್ಕಾರವು ತನ್ನ ಮಾಹಿತಿ ತಂತ್ರಜ್ಞಾನ ನೀತಿಯಲ್ಲಿ ಗುರುತಿಸಿದೆ. ಇದರಲ್ಲಿ ಎರಡು ಅಂಶಗಳು ಪ್ರಮುಖವಾಗಿವೆ.
 

1. ಗಣಕಗಳಲ್ಲಿ ಕನ್ನಡದ ಬಳಕೆಗೆ ಹಲವಾರು ಕೀಲಿಮಣೆ ವಿನ್ಯಾಸಗಳು ಲಭ್ಯವಿದ್ದುದರಿಂದ ಬಳಕೆದಾರರಲ್ಲಿ ಗೊಂದಲವಿತ್ತು. ಇದನ್ನು ಗಮನಿಸಿದ ಕರ್ನಾಟಕ ಸರ್ಕಾರವು, ಕನ್ನಡ ಗಣಕ ಪರಿಷತ್ತು, ಗಣಕ ಪರಿಣತರು ಹಾಗೂ ಕನ್ನಡ ಭಾಷಾ ತಜ್ಞರ ಸಹಕಾರದೊಂದಿಗೆ ವ್ಯಾಪಕವಾಗಿ ಅಧ್ಯಯನ ನಡೆಸಿ ರೂಪಿಸಿದ ಕೀಲಿಮಣೆ ವಿನ್ಯಾಸವನ್ನು ಅಧಿಕೃತ ವಿನ್ಯಾಸವೆಂದು ಮಾನ್ಯಮಾಡಿ ಎಲ್ಲ ತಂತ್ರಾಂಶ ತಯಾರಕರೂ ಈ ವಿನ್ಯಾಸವನ್ನೇ ಕಡ್ಡಾಯವಾಗಿ ನೀಡಬೇಕೆಂದು ಅಧಿಸೂಚನೆ ಹೊರಡಿಸಿತು.

2. ಕನ್ನಡದ ಎಲ್ಲಾ ಅಕ್ಷರಗಳು, ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಗಣಕಗಳಲ್ಲಿ ಮೂಡಿಸಲು ಬೇಕಾದ ಅಕ್ಷರಭಾಗಗಳು (ಗ್ಲಿಫ್ಗಳು) ಹಾಗೂ ಅವುಗಳನ್ನು ಸಂಕೇತ ರೂಪದಲ್ಲಿ ಸೂಚಿಸಲು ಪ್ರತಿಯೊಂದು ಲಿಪಿ ತಂತ್ರಾಂಶವೂ ಬೇರೆ ಬೇರೆ ಆಸ್ಕಿ ಸಂಕೇತಗಳನ್ನು ಬಳಸಿರುವುದರಿಂದ ಅಂತರ್ ತಂತ್ರಾಂಶ ಮಾಹಿತಿ ವಿನಿಮಯ ಸಾಧ್ಯವಿಲ್ಲ. ಅಂದರೆ ಒಂದು ಲಿಪಿ ತಂತ್ರಾಂಶವನ್ನು ಬಳಸಿ ಸಿದ್ಧಪಡಿಸಿದ ಮಾಹಿತಿಯನ್ನು ಮತ್ತೊಂದು ಲಿಪಿ ತಂತ್ರಾಂಶ ದಲ್ಲಿ ಓದಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕನ್ನಡಕ್ಕೆ ಸಾಧ್ಯವಾಗುತ್ತಿಲ್ಲ.
 

ಇವುಗಳನ್ನು ಮನಗಂಡ ಸರ್ಕಾರವು, ಕನ್ನಡ ಅಕ್ಷರ ಭಾಗಗಳು ಮತ್ತು ಅವುಗಳ ಸಂಕೇತಗಳಲ್ಲಿ (ಕೋಡ್ಸ್) ಶಿಷ್ಟತೆ, ಏಕರೂಪತೆ ಇರಬೇಕೆಂದು ನಿಶ್ಚಯಿಸಿ ಅವುಗಳನ್ನು ನಿರ್ದಿಷ್ಟ ಪಡಿಸಲು ತಜ್ಞರ ಸಮಿತಿಯನ್ನು ನೇಮಕ ಮಾಡಲು ತೀರ್ಮಾನಿಸಿತು. ಈ ತೀರ್ಮಾನದ ಅನ್ವಯ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚಿಸಿ ಆದೇಶವನ್ನು ಹೊರಡಿಸಿತು.
 

ಈ ಸಮಿತಿ ನಿರ್ವಹಿಸಬೇಕಾಗಿದ್ದ ಮುಖ್ಯ ಕರ್ತವ್ಯಗಳು:

1. ಕನ್ನಡ ಲಿಪಿ ತಂತ್ರಾಂಶಗಳು ಹೊಂದಿರಬೇಕಾದ ಅಕ್ಷರಭಾಗಗಳನ್ನು ಗುರುತಿಸುವುದು ಮತ್ತು ಅವುಗಳ ಸಂಕೇತಗಳನ್ನು ನಿರ್ದಿಷ್ಟಗೊಳಿಸುವುದು.

2. ಗಣಕಗಳಲ್ಲಿ ಕನ್ನಡದಲ್ಲಿ ದತ್ತ ಸಂಸ್ಕರಣೆಗೆ (ಡಾಟ ಪ್ರೊಸೆಸಿಂಗ್) ಅನುಕೂಲವಾಗುವಂತೆ ಕನ್ನಡದಲ್ಲಿ ದಾಖಲಾದ ದತ್ತಾಂಶಗಳ ಅಕಾರಾದಿ ವಿಂಗಡಣೆ ಮುಂತಾಗಿ ಗಣಕದಲ್ಲಿ ಕನ್ನಡದ ಸಮರ್ಥ ಬಳಕೆಗೆ ಬೇಕಾದ ಅಂಶಗಳನ್ನು ಗುರುತಿಸಿ, ಅವುಗಳಿಗೆ ಅಗತ್ಯವಾದ ಸಲಹೆ ನೀಡಿ, ಸೂಕ್ತ ವಿಧಿ ವಿಧಾನಗಳನ್ನು ರೂಪಿಸುವುದು.
 

ಸವಿತಿಯು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಚರ್ಚಿಸಿ ಪರಿಶೀಲಿಸಿ ಸಿದ್ಧಪಡಿಸಿದ ಅಕ್ಷರ ಭಾಗಗಳು ಮತ್ತು ಅವುಗಳ ಸಂಕೇತಗಳ ಕರಡು ಪಟ್ಟಿ ಹಾಗೂ ಸಂಕೇತ ಸರಣಿಯ ಪಟ್ಟಿಯನ್ನು ತಂತ್ರಾಂಶ ತಯಾರಕರಿಗೆ ಕಳುಹಿಸಿ ಅವರ ಅಭಿಪ್ರಾಯವನ್ನು ಪಡೆಯಿತು; ಜುಲೈ 15, 2000 ದಂದು ಕನ್ನಡ ಲಿಪಿ ತಂತ್ರಾಂಶ ತಯಾರಕರೊಂದಿಗೆ ಚರ್ಚಿಸತು. ಕನ್ನಡ ಲಿಪಿ ತಂತ್ರಾಂಶಗಳಿಗೆ ಕನ್ನಡ ಅಕ್ಷರ ಭಾಗಗಳ ಹಾಗೂ ಸಂಕೇತಗಳ ಶಿಷ್ಟತೆ ಹಾಗೂ ಏಕರೂಪತೆಗಳು ಅಗತ್ಯವೆಂಬ ಬಗ್ಗೆ ಎಲ್ಲ ತಂತ್ರಾಂಶ ತಯಾರಕರೂ ಸಹಮತ ವ್ಯಕ್ತಪಡಿಸಿದರು.
 

ಸಮಿತಿಯು ಐದು ಸಭೆಗಳಲ್ಲಿ ನಡೆಸಿದ ವ್ಯಾಪಕ ಚರ್ಚೆ, ತಂತ್ರಾಂಶ ತಯಾರಕರು ನೀಡಿರುವ ಸಲಹೆಗಳ ಕೂಲಂಕಷ ಪರಿಶೀಲನೆ ಹಾಗೂ ಸಮಿತಿಯ ಅಧ್ಯಯನದ ಫಲಿತಾಂಶವೇ ಈ ವರದಿ.
 

ವರದಿ:

ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಏಕಭಾಷಾ ಅಕ್ಷರ ರೂಪಗಳಿಗೆ (ಮಾನೊ-ಲಿಂಗ್ವಲ್ ಫಾಂಟ್) ಬಳಸಬೇಕಾದ ಅಕ್ಷರ ಸಂಕೇತಗಳು (ಆಸ್ಕಿ ಕೋಡ್ಸ್):
 

ಆಸ್ಕಿ ಯ 256 ಸಂಕೇತಗಳ ಪೈಕಿ, ಕನ್ನಡಕ್ಕೆ ದೊರೆಯಬಹುದಾದ ಸಂಕೇತಗಳು ಹೀಗಿವೆ:

1. ಕಾರ್ಯಾಚರಣ ವ್ಯವಸ್ಥೆಗಾಗಿ 0 ಇಂದ 31 ರವರೆಗಿನ ಸಂಕೇತಗಳು ಬಳಕೆಯಾಗುತ್ತಿವೆ.

2. ಸಂಕೇತ 32 ಖಾಲಿಜಾಗಕ್ಕಾಗಿ ಬಳಕೆಯಲ್ಲಿದೆ.

3. 33 ರಿಂದ 47, 58 ರಿಂದ 64, 91 ರಿಂದ 96, 123 ರಿಂದ 126 ರವರೆಗಿನ ಸಂಕೇತಗಳು ವಿಶೇಷ ಚಿಹ್ನೆಗಳಿಗಾಗಿ (#, $, %, & ಇತ್ಯಾದಿ) ಬಳಕೆಯಲ್ಲಿವೆ.

4. 48 ರಿಂದ 57 ರ ವರೆಗಿನ 10 ಸಂಕೇತಗಳು ಅಂಕಿಗಳಿಗಾಗಿ ಮೀಸಲಾಗಿವೆ.

5. 127 ರಿಂದ 161, 173, 179, 180 ಮತ್ತು 183 ಸಂಕೇತಗಳನ್ನು ಹಲವಾರು ಆನ್ವುಕ ತಂತ್ರಾಂಶಗಳು ಬಳಸುತ್ತಿವೆ. ಇವುಗಳನ್ನು ಕನ್ನಡಕ್ಕೆ ಬಳಸಿದರೆ ತೊಡಕುಗಳು ಉಂಟಾಗುತ್ತವೆ.
 

ಈ ಸಂಕೇತಗಳನ್ನು ಹೊರತುಪಡಿಸಿ ಕನ್ನಡಕ್ಕಾಗಿ 142 ಂಖಅ ಸಂಕೇತಗಳು ಲಭ್ಯವಿರುತ್ತವೆ. ಕನ್ನಡ ಲಿಪಿ ತಂತ್ರಾಂಶಗಳು ಈ ಸಂಕೇತಗಳನ್ನು ಮಾತ್ರ ಬಳಸಿಕೊಳ್ಳಬೇಕಾದುದು ಅನಿವಾರ್ಯ.
 

ಕನ್ನಡ ಲಿಪಿಗೆ ಬೇಕಾದ ಅಕ್ಷರಭಾಗಗಳು:

ಕನ್ನಡವನ್ನು ಗಣಕಗಳಲ್ಲಿ ಮೂಡಿಸಲು ವಿವಿಧ ಲಿಪಿ ತಂತ್ರಾಂಶಗಳು ಬಳಸುತ್ತಿರುವ ಅಕ್ಷರ ಭಾಗಗಳು ಮತ್ತು ಅವು ಬಳಸುವ ಸಂಕೇತ ವ್ಯವಸ್ಥೆಯಲ್ಲಿ ಅನೇಕ ವ್ಯತ್ಯಾಸಗಳಿವೆ. ಇದನ್ನು ಪರಿಶೀಲಿಸಿದಾಗ ಸ್ಪಷ್ಟವಾಗುವ ಅಂಶಗಳು:

1. ಬಹುಮಟ್ಟಿಗೆ ಎಲ್ಲಾ ಸ್ವರಗಳು, ವರ್ಗೀಯ ವ್ಯಂಜನಗಳ ಪೈಕಿ ಹಲವಾರು ಅಲ್ಪಪ್ರಾಣ ವ್ಯಂಜನಗಳು ಮತ್ತು ಬಹುಮಟ್ಟಿನ ಅವರ್ಗೀಯ ವ್ಯಂಜನಗಳಿಗೆ ಒಂದೇ ರೀತಿಯ ಅಕ್ಷರ ಭಾಗಗಳನ್ನು ಬಳಸಲಾಗಿದೆ.

2. ಹಲವಾರು ಮಹಾಪ್ರಾಣ ವ್ಯಂಜನಗಳನ್ನು ಅಲ್ಪಪ್ರಾಣ ವ್ಯಂಜನಗಳಿಂದ ಪಡೆಯುವ ತಂತ್ರಗಳನ್ನು ಅನುಸರಿಸಲಾಗಿದೆ.

3. ಸ್ವರಚಿಹ್ನೆಗಳ(ಮಾತ್ರಾಗಳು) ಅಕ್ಷರಭಾಗಗಳು ಏಕರೂಪವಾಗಿವೆ.

4. ಒಂದಕ್ಕಿಂತ ಹೆಚ್ಚು ಒತ್ತಕ್ಷರಗಳನ್ನು ಮೂಡಿಸುವಾಗ, ಹಲವು ಅಕ್ಷರಭಾಗಗಳನ್ನು ಗುರುತಿಸಲಾಗಿದೆ; ಇವುಗಳಲ್ಲಿ ಶಿಷ್ಟತೆಯಾಗಲಿ ಏಕರೂಪತೆಯಾಗಲಿ ಇಲ್ಲ.

5. ಈ ತಂತ್ರಾಂಶಗಳು ಒಟ್ಟು 145 ರಿಂದ 201 ಸಂಖ್ಯೆಯಷ್ಟು ಅಕ್ಷರಭಾಗಗಳನ್ನು ಬಳಸಿವೆ.
 

ಈ ಅಂಶಗಳನ್ನು ಗಮನಿಸಿ, 142 ಲಿಪಿಸಂಕೇತಗಳ ಮಿತಿಯಲ್ಲಿ ಕನ್ನಡಕ್ಕೆ ಬೇಕಾದ ಕನಿಷ್ಠತಮ ಅಕ್ಷರಭಾಗಗಳನ್ನು ನಿಶ್ಚುಸಲು ತೀರ್ಮಾನಿಸಿ, ಅನುಸರಿಸಿರುವ

ಕ್ರಮ ಹೀಗಿದೆ.

1. ಕನ್ನಡ ಬರವಣಿಗೆಗೆ ಬೇಕಾದ ಅಕ್ಷರಗಳು, ಗುಣಿತಾಕ್ಷರಗಳು, ಸಂಯುಕ್ತಾಕ್ಷರಗಳನ್ನು ಮೂಡಿಸಲು (ಗಣಕ ಕೀಲಿಮಣೆಯಲ್ಲಿ ಲಭ್ಯವಿರುವ ಎಲ್ಲಾ ಚಿನ್ಹೆಗಳನ್ನು

   ಉಳಿಸಿಕೊಂಡು) ಅಗತ್ಯವಾದ ಕನಿಷ್ಠ ಸಂಖ್ಯೆಯ ಅಕ್ಷರಭಾಗಗಳನ್ನು ಗುರುತಿಸುವುದು.

2. ಅನಂತರ ಉಳಿಯುವ ಸಂಕೇತಗಳನ್ನು ಅತಿ ಹೆಚ್ಚು ಬಳಕೆಯಲ್ಲಿರುವ ಎರಡು ಅಥವಾ ಹೆಚ್ಚಿನ ಒತ್ತಕ್ಷರಗಳಿಗೆಂದು ಗುರುತಿಸುವ ಪ್ರತ್ಯೇಕ ಅಕ್ಷರಭಾಗಗಳಿಗಾಗಿ

   ಬಳಸುವುದು.
 

ಮೇಲ್ಕಂಡ ಎಲ್ಲ ಅಂಶಗಳ ಸಮಗ್ರ ಪರಿಶೀಲನೆ, ಸಲಹೆ ಮತ್ತು ಚರ್ಚೆಗಳ ನಂತರ ನಿಗದಿಪಡಿಸಿದ ಅಕ್ಷರಭಾಗಗಳು ಮತ್ತು ಅವುಗಳಿಗೆ ಗುರುತಿಸಿದ ಸಂಕೇತಗಳ ಪಟ್ಟಿಯನ್ನು ಸಮಿತಿಯು ಸಿದ್ಧಪಡಿಸಿದೆ.

ಇದರಲ್ಲಿ ಸೂಚಿಸಿರುವ ಅಕ್ಷರಭಾಗಗಳನ್ನು ಬಳಸಿಕೊಂಡು ಕನ್ನಡ ಅಕ್ಷರಮಾಲೆಯ ಎಲ್ಲ ಅಕ್ಷರಗಳನ್ನೂ, ಗುಣಿತಾಕ್ಷರಗಳನ್ನೂ, ಸಂಯುಕ್ತಾಕ್ಷರಗಳನ್ನೂ ಪಡೆಯುವ ಸಂಕೇತ ಸರಣಿಗಳನ್ನು ಸೂಚಿಸುವ ಕೆಲವು ಉದಾಹರಣೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ.
 

ವಿವರಣೆ:

1. ಕನ್ನಡ ಅಕ್ಷರಭಾಗಗಳಿಗೆ ಆಸ್ಕಿ ಸಂಕೇತಗಳನ್ನು ನಿಗದಿಪಡಿಸುವಾಗ ಕನ್ನಡ ಮೂಲಾಕ್ಷರಗಳ ಅಕ್ಷರಭಾಗಗಳು, ಸ್ವರಚಿನ್ಹೆಗಳು ಮತ್ತು ಒತ್ತಕ್ಷರಗಳನ್ನು ಅವುಗಳ ಸಹಜ ಅನುಕ್ರಮಣಿಕೆಯಲ್ಲಿರುವಂತೆ ಪ್ರತ್ಯೇಕ ಗುಂಗಳಾಗಿ ಪರಿಗಣಿಸಿದೆ. ಇದರಿಂದ ಗಣಕಗಳೊಳಗೆ ಸಂಕೇತಗಳ ಮೂಲಕ ಅಕ್ಷರಗಳನ್ನು ಗುರುತಿಸಲು, ಇಸ್ಕಿ/ಯೂನಿಕೋಡ್ ಸಂಕೇತಗಳಿಗೆ ಬದಲಿಸಲು ಸುಲಭವಾಗುತ್ತದೆ.

2. ಎರಡು ಸಂಕೇತಗಳನ್ನು (246 ಮತ್ತು 247) ಖಾಲಿಜಾಗಗಳಿಗೆಂದು (ಸ್ಮಾಲ್ ಅಂಡ್ ಬಿಗ್ ವೈಟ್ ಸ್ಪೇಸಸ್) ಕ್ರಮವಾಗಿ ಮೀಸಲಿರಿಸಲಾಗಿದೆ. ಎರಡು ಅಕ್ಷರಗಳ ನಡುವಿನ ಬಿಡುವುಗಳು ಮತ್ತು ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳ ಕೆಲವು ಸಂದರ್ಭಗಳಲ್ಲಿ ಇವುಗಳ ಬಳಕೆ ಉಪಯುಕ್ತ.

3. ಕನ್ನಡದ ಬರವಣಿಗೆಯಲ್ಲಿ ರ ಮತ್ತು ಋ ಅಕ್ಷರದ ಒತ್ತುಗಳು ( ಮತ್ತು  ಎರಡನೆಯ ಒತ್ತಕ್ಷರಗಳಾಗಿ ಹೆಚ್ಚಾಗಿ ಬಳಕೆಯಲ್ಲಿವೆ. ಅವನ್ನು ಯಾವುದಾದರೊಂದು ವ್ಯಂಜನದ ಮೊದಲನೆಯ ಮತ್ತು ಎರಡನೆಯ ಒತ್ತಾಗಿ ಬಳಸಿದಾಗ ಮೊದಲ ವ್ಯಂಜನದ ಕೆಳಗೆ ಬೇರೆ ಬೇರೆ ಎತ್ತರಗಳಲ್ಲಿ (ಲಂಬತಳದಲ್ಲಿ) ಬರೆಯಬೇಕಾಗುತ್ತದೆ. ಆದ್ದರಿಂದ ರ ಅಕ್ಷರದ ಒತ್ತಕ್ಷರಕ್ಕಾಗಿ ಎರಡು ಸಂಕೇತಗಳನ್ನೂ (230,231) ಋ ಅಕ್ಷರದ ಒತ್ತಕ್ಷರಕ್ಕಾಗಿ ಮತ್ತೆರಡು ಸಂಕೇತಗಳನ್ನೂ (200, 248) ನಿಗದಿ ಪಡಿಸಲಾಗಿದೆ.

4. ಹಳಗನ್ನಡದ ರ ಮತ್ತು ಳ ಅಕ್ಷರಗಳ ಒತ್ತಕ್ಷರಗಳಿಗಾಗಿ ಎರಡು (249 ಮತ್ತು 250) ಸಂಕೇತಗಳನ್ನು ನಿಗದಿಪಡಿಸಲಾಗಿದೆ.

5. ಜ ಮತ್ತು ಫ ಅಕ್ಷರಗಳನ್ನು ಪಡೆಯಲು ಜ ಮತ್ತು ಫ ಅಕ್ಷರಗಳ ಕೆಳಗೆ ಬೇಕಾದ ಚುಕ್ಕೆಗಳಿಗಾಗಿ 243 ಮತ್ತು 251 ಸಂಕೇತಗಳನ್ನು ನಿಗದಿಪಡಿಸಲಾಗಿದೆ.

6. ಡ, ದ, ಪ, ಬ ಅಕ್ಷರಗಳಿಂದ ಢ, ಧ, ಫ, ಭ ಅಕ್ಷರಗಳನ್ನು ಪಡೆಯಲು ಹೊಕ್ಕಳ ಸೀಳು ಚಿಹ್ನೆಯನ್ನು ಸಂಕೇತ 115 ರಲ್ಲಿ ನೀಡಿರುವಂತೆ, ಡಿ, ದಿ, ಪಿ, ಬಿ ಅಕ್ಷರಗಳಿಂದ ಢಿ, ಧಿ, ಫಿ, ಭಿ ಅಕ್ಷರಗಳನ್ನು ಪಡೆಯಲು ಸಂಕೇತ 252 ರಲ್ಲಿ ಮತ್ತೊಂದು ಹೊಕ್ಕಳ ಸೀಳು ಚಿಹ್ನೆಯನ್ನು ನೀಡಲಾಗಿದೆ.

7. ಇಲ್ಲಿಯವರೆಗೆ ವಿಂಡೋಸ್ ಅಂಕಣದ ಅನೇಕ ಆವೃತ್ತಿಗಳು ಹೊರ ಬಂದಿವೆ. ಇದರ ಪ್ರತಿ ಆವೃತ್ತಿ/ಕೆಲವು ಆನ್ವುಕ ತಂತ್ರಾಂಶಗಳ ಆವೃತ್ತಿಗಳಲ್ಲಿ ಕೆಲವು ಆಸ್ಕಿ ಸಂಕೇತಗಳನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಸಿಬಿಡುತ್ತವೆ. ಅಂತಹ ಸಂಕೇತಗಳನ್ನು ಕನ್ನಡ ಅಕ್ಷರಭಾಗಗಳಿಗೆ ನಿಗದಿಪಡಿಸಿದ್ದರೆ ಆ ಕಾರ್ಯಾಚರಣ ವ್ಯವಸ್ಥೆ/ಆನ್ವುಕ ತಂತ್ರಾಂಶಗಳನ್ನು (ಅಪ್ಲಿಕೇಷನ್ ಸಾಪ್ಟವೇರ್) ಬಳಸುವಾಗ ತೊಡಕು ಗಳು ಕಂಡುಬರುತ್ತವೆ. ಇದಕ್ಕಾಗಿ ಸೂಕ್ತ ಬದಲಾವಣೆಗಳನ್ನು ಮಾಡಲು ಮೂರು (253, 254, 255) ಸಂಕೇತಗಳನ್ನು ಬಳಸದೆ ಮೀಸಲಿರಿಸಿದೆ.
 

ಶಿಫಾರಸುಗಳು:

1. ಸಮಿತಿಯು ನಿಗದಿಪಡಿಸಿರುವ ಕನ್ನಡ ಅಕ್ಷರಭಾಗಗಳು ಮತ್ತು ಆಸ್ಕಿ ಸಂಕೇತಗಳನ್ನೇ ಎಲ್ಲಾ ಕನ್ನಡ ಲಿಪಿ ತಂತ್ರಾಂಶಗಳೂ ಅಳವಡಿಸಿಕೊಳ್ಳಬೇಕು.

2. ಬಹುಮುಖ್ಯವಾಗಿ ಅಕ್ಷರಭಾಗ ಸಂಕೇತಗಳಲ್ಲಿ (ಗ್ಲಿಫ್ ಕೋಡ್) ಶೇಖರಿಸಲ್ಪಟ್ಟ ದತ್ತಾಂಶಗಳನ್ನು ಇಸ್ಕಿ ಸಂಕೇತಗಳಿಗೆ ಬದಲಿಸಬಲ್ಲ ಮತ್ತು ಪರ್ಯಾಯವಾಗಿ ಇಸ್ಕಿ ಸಂಕೇತಗಳಲ್ಲಿ ಸಿದ್ಧವಾಗುವ ದತ್ತಾಂಶ ಗಳನ್ನು ಅಕ್ಷರಭಾಗ ಸಂಕೇತಗಳಿಗೆ ಬದಲಿಸಬಲ್ಲ ಉಪಯುಕ್ತ ತಂತ್ರಾಂಶ ಸೌಲಭ್ಯಗಳನ್ನು (ಯ್ಯಟಿಲಿಟಿ ಮಾಡ್ಯು್) ನೀಡಬೇಕು. ಆ ಮೂಲಕ ಕನ್ನಡ ದತ್ತಾಂಶಗಳ ಅಕಾರಾದಿ ವಿಂಗಡಣೆ (ಸಾರ್ಟಿಂಗ್) ಮತ್ತು ಸೂಚೀಕರಣ (ಇಂಡೆಕ್ಷಿಂಗ್) ಮಾಡಬಲ್ಲ ಸೌಲಭ್ಯಗಳನ್ನೂ ಕನ್ನಡ ಲಿಪಿ ತಂತ್ರಾಂಶಗಳು ನೀಡಬೇಕು. ಕನ್ನಡ ದತ್ತಾಂಶಗಳ ವಿಂಗಡಣೆಯ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಂಟಿನಲ್ಲಿರುವಂತೆ ಅನುಸರಿಸಬೇಕು. ಅದು ಈ ಕೆಳಗಿನಂತಿದೆ.
 

ಂ, ಃ, ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ, ಕ, ಖ, ಗ, , ಙ, ಚ, ಛ, ಜ, ಝ, ಞ, ಟ, ಠ, ಡ, ಢ, ಣ, ತ, ಥ, ದ, ಧ, ನ, ಪ, ಫ, ಬ, ಭ, ಮ, ಯ, ರ, ರ, ಲ, ವ, ಶ, ಷ, ಸ, ಹ, ಳ, ಳ
 

3. ಹೆಚ್.ಟಿ.ಎಮ್.ಎಲ್. (ಸಾರ್ಟಿಂಗ್ ಹೈಪರ್ ಟೆಕ್ಷಟ್ ಮಾರ್ಕಿಂಗ್ ಲ್ಯಾಂಗ್ವೇಜ್), ಆರ್.ಟಿ.ಎಫ್. (ರಿಚ್ ಟೆಕ್ಷಟ್ ಫಾರಮೇಟ್), ಟೆಕ್ಷಟ್ ಮುಂತಾದ ರೂಪಗಳಲ್ಲಿ ಕನ್ನಡದ ಕಡತಗಳನ್ನು ಶೇಖರಿಸಿಡಲು ಅಗತ್ಯವಾದ ಅನುಕೂಲತೆಗಳನ್ನು ಕನ್ನಡ ಲಿಪಿ ತಂತ್ರಾಂಶಗಳು ಒದಗಿಸಬೇಕು.

4. ಅಗತ್ಯವಿರುವ ಎಲ್ಲ ಸಂದರ್ಭಗಳಲ್ಲಿ, ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಈಗಾಗಲೇ ಇರುವ ತಿಯನ್ನು ಹೊಸ ಸಂಕೇತಗಳಿಗೆ (ಶಿಷ್ಟ ಮತ್ತು ಏಕರೂಪ) ಅನ್ವುಸುವ ಅಕ್ಷರ ರೂಪಗಳಿಗೆ ಬದಸಲು ಅನುಕೂಲವಾಗುವಂತೆ ಬದಲಾವಣೆಸಾಧ್ಯ ಅನುಕೂಲತೆಗಳನ್ನು (ಕನ್ವರಷನ್ ಯ್ಯಟಿಲಿಟಿ) ನೀಡಬೇಕು.
 

ಅನುಷ್ಠಾನ:

ಮೇಲ್ಕಂಡ ಶಿಫಾರಸುಗಳ ಅನುಷ್ಠಾನದ ದೃಷ್ಟಿಯಿಂದ ಸರ್ಕಾರಕ್ಕೆ ಸಮಿತಿಯ ಕೆಲವು ಸಲಹೆಗಳು:

1. ಮೇಲ್ಕಾಣಿಸಿದ ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು ಸಿದ್ಧಪಡಿಸಿದ ತಂತ್ರಾಂಶಗಳು ಮಾತ್ರ ಸರ್ಕಾರದ ಮಾನ್ಯತೆ ಪಡೆದ ಅಧಿಕೃತ ತಂತ್ರಾಂಶಗಳ/ತಂತ್ರಾಂಶ ತಯಾರಕರ/ತಂತ್ರಾಂಶ ಮಾರಾಟಗಾರರ ಪಟ್ಟಿಯಲ್ಲಿರಬೇಕು.

2. ಕನ್ನಡ ತಂತ್ರಾಂಶಗಳು ಈ ನಿಬಂಧನೆಗಳಿಗೆ ಒಳಪಟ್ಟಿವೆಯೇ ಎಂಬುದನ್ನು ಗುರುತಿಸಿ ಪ್ರಮಾಣೀಕರಿಸುವ ವ್ಯವಸ್ಥೆ ಇರಬೇಕು.

3. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾಲಯಗಳು, ವಿದ್ಯಾಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು, ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು, ಈ ನಿಬಂಧನೆಗಳಿಗೊಳಪಟ್ಟು ಪ್ರಮಾಣೀಕೃತವಾದ ಕನ್ನಡ ಲಿಪಿ ತಂತ್ರಾಂಶಗಳನ್ನು ಮಾತ್ರ ಬಳಸಬೇಕು.