ಮನವಿ
ಪ್ರಿಯ ಕನ್ನಡಿಗರೆ,
ಕನ್ನಡ ಗಣಕ ಪರಿಷತ್ತು ಒಂದು ಸ್ವಯಂ ಸೇವಾ ಸಂಸ್ಥೆ. ಕನ್ನಡವನ್ನು ಗಣಕ, ತನ್ಮೂಲಕ ಅಂತರಜಾಲದಲ್ಲಿ ವ್ಯಾಪಕವಾಗಿ ಬಳಸಲು, ಕನ್ನಡದ ಮಾಹಿತಿ ಯಾವುದೇ ಅಡೆತಡೆಯಿಲ್ಲದೇ ವಿಶ್ವಾದ್ಯಂತ ದೊರೆಯುವಂತೆ ಮಾಡಲು, ಮಾಹಿತಿ ತಂತ್ರಜ್ಞಾನದ ಗರಿಷ್ಠ ಪ್ರಯೋಜನಗಳನ್ನು ಕನ್ನಡಕ್ಕೆ ತಂದುಕೊಳ್ಳಲು ಸದಾ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಕನ್ನಡದಲ್ಲಿ ಅತ್ಯಾವಶ್ಯಕವಾಗಿ ಆಗಬೇಕಾಗಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಉತ್ಸುಕವಾಗಿದೆ.
ನುಡಿ ತಂತ್ರಾಂಶ , ಕನ್ನಡ-ಕನ್ನಡ ಸಂಕ್ಷಿಪ್ತ ನಿಂಟು, ಪಂಪ ಭಾರತ, ಆದಿಪುರಾಣಗಳ ಅಡಕ ಮುದ್ರಿಕೆಗಳು, ಕನ್ನಡ ಗಣಕ ಪರಿಷತ್ತಿನ ಕನ್ನಡದ ಕುರಿತಾದ ಬದ್ಧತೆಗೆ ನಿದರ್ಶನಗಳಾಗಿವೆ. ಇಂತಹ ಕೆಲಸಗಳು ಎಷ್ಟು ಜನ ಮಾಡಿದರೂ ಸಾಲದು.
ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿರುವ ಮುಖ್ಯ ಕೆಲವು ಕೆಲಸಗಳು ಹೀಗಿವೆ:
1. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಅಡಕ ಮುದ್ರಿಕೆ.
2. ಕನ್ನಡ ವಿಷಯ ವಿಶ್ವಕೋಶ ಅಡಕ ಮುದ್ರಿಕೆ.
3. ಕನ್ನಡ ವಿಶ್ವಕೋಶ ಅಡಕ ಮುದ್ರಿಕೆ.
4. ಕನ್ನಡ -ಕನ್ನಡ ನಿಂಟು ಅಡಕ ಮುದ್ರಿಕೆ.
5. ಕನ್ನಡ-ಇಂಗ್ಲಿಷ್ ನಿಂಟು ಅಡಕ ಮುದ್ರಿಕೆ.
6. ಕನ್ನಡ ಕನ್ನಡ ಇಂಗ್ಲಿಷ್ ನಿಂಟು ಅಡಕ ಮುದ್ರಿಕೆ.
7. ಕನ್ನಡ ಗ್ರಂಥಸಂಪದ ಅಂತರಜಾಲ ತಾಣ.
8. ಅಕ್ಷಯ ಮಾಹಿತಿ ಸಂಚಯ ಅಂತರಜಾಲ ತಾಣ.
9. ನುಡಿ ತಂತ್ರಾಂಶದೊಡನೆ ಕೊಡುವ ಕನ್ನಡ ವ್ಯಾಕರಣ, ಪದಪರೀಕ್ಷೆಗಳು ಮುಂತಾದ ಸೌಲಭ್ಯಗಳು.
10. ಕನ್ನಡ ಸಾಹಿತ್ಯದ ಎಲ್ಲ ಪ್ರಮುಖ ಕೃತಿಗಳು - ಅಡಕ ಮುದ್ರಿಕೆಗಳು.
11. ಕನ್ನಡಕ್ಕೆ ಒಂದು `ಅಕ್ಷರ ಜಾಣ' ( ಓ ಸಿ ಆರ್) ತಂತ್ರಾಂಶವನ್ನು ಸಿದ್ಧಪಡಿಸುವುದು.
12. ಕನ್ನಡಕ್ಕೆ ಒಂದು `ದನಿಜಾಣ' ( ವಾಯ್ಸ್ ರೆಕಗ್ನಿಷಬ್) ರೂಪಿಸುವುದು.
13. ಕನ್ನಡ ಮಕ್ಕಳ ಕಥೆಗಳು ಅಡಕ ಮುದ್ರಿಕೆ (ಅನಿಮೇಷನ್ಸಹಿತ).
14. ಕನ್ನಡ ಮಕ್ಕಳ ಪದ್ಯಗಳು ಅಡಕ ಮುದ್ರಿಕೆ (ಅನಿಮೇಷನ್ಸಹಿತ).
15. ಕರ್ನಾಟಕದ ಮಾಹಿತಿ-ಅಂತರಜಾಲ ತಾಣ.
ಇಂತಹ ಕೆಲಸಗಳು ಸಾಕಷ್ಟು ಹಣ ಹಾಗೂ ಮಾನವ ಸಂಪನ್ಮೂಲಗಳನ್ನು ಬೇಡುತ್ತವೆ ಎನ್ನುವುದು ಸ್ಪಷ್ಟವಾಗಿಯೇ ಇದೆ. ಈ ನಿಟ್ಟಿನಲ್ಲಿ ಕನ್ನಡ ಗಣಕ ಪರಿಷತ್ತು ನಿಮ್ಮಿಂದ ಎಲ್ಲ ಬಗೆಯ ಸಹಕಾರವನ್ನು ಕೃತಜ್ಞತೆಯಿಂದ ಸ್ವಾಗತಿಸುತ್ತದೆ. ಆಸಕ್ತ ಕನ್ನಡಿಗರು ದಯಮಾಡಿ ಕನ್ನಡ ಗಣಕ ಪರಿಷತ್ತನ್ನು ಸಂಪರ್ಕಿಸಬೇಕೆಂದು ವಿನಂತಿ.
ಬ್ಯಾಂಕ್ ಖಾತೆಯ ವಿವರ
STATE BANK OF INDIA
A/C: 10309112702
IFSC: SBIN0070242
Tippu Sultan Palace Road Branch, Bangalore
- ಕನ್ನಡ ಗಣಕ ಪರಿಷತ್ತು, ಬೆಂಗಳೂರು.