ಧ್ಯೇಯೋದ್ದೇಶಗಳು
ಪುಟ ರಚನೆ : ಕ.ಗ.ಪ., ದಿನಾಂಕ : Thursday, 17 April 2014
- ಕನ್ನಡ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ನೆರವಾಗುವುದು.
- ಕನ್ನಡ ತಂತ್ರಾಂಶ ತಯಾರಕರ ಹಾಗೂ ಅದರ ಬಳಕೆದಾರರ ನಡುವೆ ಸಮನ್ವಯದಿಂದ ಒಟ್ಟಾರೆ ಕನ್ನಡ ತಂತ್ರಾಂಶಗಳಿಗೆ ಇರುವ ಅವಕಾಶಗಳನ್ನು ಹೆಚ್ಚಿಸುವುದು.
- ಬಳಕೆದಾರರಿಗೆ ಐಪಯುಕ್ತವಾದ ಏಕರೂಪತೆಯಿರುವ ಕೀಲಿಮಣೆಯನ್ನು ರೂಪಿಸುವುದು. ಧ್ವನಿಗ್ರಹಣ, ಅಕ್ಷರಗ್ರಹಣ ಮುಂತಾದ ತಂತ್ರಾಂಶಗಳನ್ನು ಕನ್ನಡಕ್ಕೆ ಅನ್ವಯವಾಗುವಂತೆ ಸಿದ್ಧಪಡಿಸಲು ವ್ಯವಸ್ಥಿತ ಯೋಜನೆಗಳನ್ನು ರೂಪಿಸುವುದು.
- ಕನ್ನಡದ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳನ್ನು ಒಂದು ಗಣಕ ಜಾಲಕ್ಕೆ ಜೋಡಿಸಿ ಮಾಹಿತಿ ವಿನಿಮಯಕ್ಕೆ ಅವಕಾಶ ಒದಗಿಸುವುದು.
- ಗಡಿನಾಡು, ಹೊರನಾಡು, ವಿದೇಶಿ ಕನ್ನಡಿಗರ ನಡುವೆ ಸಂಪರ್ಕ ವ್ಯವಸ್ಥೆಯೊಂದನ್ನು ಕಲ್ಪಿಸುವುದು.
- ಕನ್ನಡದ, ಕರ್ನಾಟಕದ ಕುರಿತು ಒಂದು ಬೃಹತ್ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು. ಗಣಕಕ್ಕೆ ಸಂಬಂಧಿಸಿದಂತೆ ಒಂದು ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸುವುದು.
- ತನ್ನ ಆಡಳಿತದಲ್ಲಿ ಗಣಕಗಳ ಬಳಕೆಯ ಎಲ್ಲ ಸಂದರ್ಭಗಳಲ್ಲೂ ಸರ್ಕಾರವು ಕನ್ನಡವನ್ನು ಸಂರ್ಣವಾಗಿ ಬಳಸಬೇಕೆಂದು ಒತ್ತಾಯಿಸುವುದು.
- ಕನ್ನಡದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಿರುವವರಿಗೆ ಗಣಕದ ಮೂಲಕ ಹೆಚ್ಚಿನ ನೆರವು ನೀಡಿಕೆ.
- ಕನ್ನಡದ ಎಲ್ಲಾ ಸಾಹಿತ್ಯಕೃತಿಗಳನ್ನು ಅಡಕಮುದ್ರಿಕೆಗಳಲ್ಲಿ ಅಳವಡಿಸಿ ಅವು ಸುಲಭವಾಗಿ ದೊರೆಯುವಂತೆ ಮಾಡುವುದು.
- ಗಣಕಗಳಲ್ಲಿ ಕನ್ನಡವನ್ನು ಸಮಗ್ರವಾಗಿ ಬಳಸುವ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ ಮಾಹಿತಿ ಕ್ರಾಂತಿಯ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಮಾಡುವುದು.
- ಕನ್ನಡ ಹಾಗೂ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗಣಕಗಳನ್ನು ಬಳಸಲು ಸೂಕ್ತವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು.
- ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಒಂದು ಮಾಹಿತಿ ಆಕರವನ್ನು ನಿರ್ಮಿಸುವುದು.
- ಕನ್ನಡದ ಎಲ್ಲಾ ನಿಂಟು, ವಿಶ್ವಕೋಶಗಳು ಮುಂತಾದವನ್ನು ಗಣಕಕ್ಕೆ ಅಳವಡಿಸಿ ಎಲ್ಲೆಡೆ ದೊರೆಯುವಂತೆ ಮಾಡುವುದು.
- ಅಂತರಜಾಲದಲ್ಲಿ ಕನ್ನಡದ ತಾಣಗಳನ್ನು ಹೆಚ್ಚಾಗಿ ಏರ್ಪಡಿಸಿ ಅಲ್ಲೆಲ್ಲಾ ಕನ್ನಡ ಮಾಹಿತಿ ದೊರೆಯಲು ಅನುವು ಮಾಡಿಕೊಡುವುದು.
- ಗಣಕದಲ್ಲಿ ಕನ್ನಡ ಬಳಕೆಯ ಕುರಿತಾದ ತರಬೇತಿಗೆ ವ್ಯವಸ್ಥೆಯನ್ನು ಮಾಡುವುದು.
- ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಗಣಕದ ಮೂಲಕ ಬಳಸಲು ಅಗತ್ಯವಾದ ನೆರವನ್ನು ನೀಡುವುದು.
ಸುದ್ದಿ-ಸಮಾಚಾರಗಳು
ಉಚಿತ ತಂತ್ರಾಂಶಗಳು
ಸುದ್ದಿ-ಸಮಾಚಾರಗಳು
ನುಡಿ 6.0 32 / 64 ಬಿಟ್ ಆವೃತ್ತಿ ಬಿಡುಗಡೆಗೊಂಡಿದೆ.
ನುಡಿ ಮ್ಯಾಕ್ ಆವೃತ್ತಿ ಲಭ್ಯವಿದೆ.
ಯೋಜನೆಗಳು
ಅಡಕ ಮುದ್ರಿಕೆಗಳು
ವೀಡಿಯೋ ಟುಟೋರಿಯಲ್ಸ್
ಅಕ್ಷರ ಕಲಿ - ವೀಡಿಯೋ
ಕನ್ನಡ ಅಕ್ಷರ ಕಲಿ ವೀಡಿಯೋ ಸದ್ಯದಲ್ಲೇ ಕೀಲಿಮಣೆ ಭೋಧಕ ವೀಡಿಯೋ ಪ್ರಕಟಿಸಲಾಗುತ್ತದೆ.
ಕನ್ನಡ ಅಕ್ಷರ ಕಲಿ ವೀಡಿಯೋ ಸದ್ಯದಲ್ಲೇ ಕೀಲಿಮಣೆ ಭೋಧಕ ವೀಡಿಯೋ ಪ್ರಕಟಿಸಲಾಗುತ್ತದೆ.